Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕಾಂಗ್ರೆಸ್‌ನ 40-45 ಜನ ನನ್ನ ಸಂಪರ್ಕದಲ್ಲಿದ್ದಾರೆ:ಬಿ.ಎಲ್. ಸಂತೋಷ್ ಸ್ಫೋಟದ ಹೇಳಿಕೆ

kannada news kannada news paper kannada news today - ಕನ್ನಡ ನ್ಯೂಸ್ ಟುಡೇ kannada news channel today kannada news dailyhunt kannada news kannada news a

 


ಬೆಂಗಳೂರು ;- ಕಾಂಗ್ರೆಸ್‌ನ 40-45 ಜನ ನನ್ನ ಸಂಪರ್ಕದಲ್ಲಿದ್ದಾರೆ, ಆಪರೇಷನ್‌ಗೆ ಒಂದು ದಿನ ಸಾಕು ಎಂದು ಬಿ.ಎಲ್‌ ಸಂತೋಷ್‌ ಹೇಳಿದ್ದಾರೆ

ಈ ಸಂಬಂಧ ಮಾತನಾಡಿದ ಅವರು,ಕರ್ನಾಟಕದ ಸುಮಾರು 40-45 ಶಾಸಕರು ನನ್ನ ಜತೆಗೇ ಸಂಪರ್ಕದಲ್ಲಿದ್ದಾರೆ. ದೆಹಲಿಯ ನಾಯಕರು ಒಪ್ಪಿಗೆ ಕೊಟ್ಟರೆ ನನಗೆ ಒಂದು ದಿನ ಕೆಲಸ ಎಂದರು. ಬಿಜೆಪಿಯಿಂದ ಕೆಲವರು ಕಾಂಗ್ರೆಸ್‌ನ ಆಪರೇಷನ್‌ಗೆ ಒಳಗಾಗುವ ಸಾಧ್ಯತೆಗಳ ಬಗ್ಗೆಯೂ ಮಾತನಾಡಿದರು.

ನಮ್ಮಲ್ಲಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ ಎಂದು ಹೇಳುವ ಮೂಲಕ ಪಕ್ಷದಲ್ಲಿ ಧೈರ್ಯ ತುಂಬುವ ಯತ್ನ ಮಾಡಿದ ಸಂತೋಷ್‌ ಅವರು, ನಮ್ಮ ಜತೆಗೆ ಬಂದವರನ್ನು ನಾವೇ ಬಾಂಬೇ ಬಾಯ್ಸ್‌ ಅಂತ ಹೇಳುವುದು ಬೇಡ. ಕಷ್ಟ ಕಾಲದಲ್ಲಿ ನಮ್ಮ ಜೊತೆಗೆ ಬಂದಿದ್ದಾರೆ. ಅವರು ಹೋಗುತ್ತಾರೆ ಅಂತ ನಾವೇ ಹೇಳುವುದು ಸರಿಯಲ್ಲ. ಹಾಗಂತ ಹೋಗುವವರ ಬಗ್ಗೆ ಚಿಂತೆ ಬೇಡ ಎಂದು ಹೇಳಿದರು ಸಂತೋಷ್‌.

ನಮ್ಮ ಪಕ್ಷದಿಂದ 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು. ನನ್ನ ಜೊತೆಯೇ 40-45 ಮಂದಿ ಸಂಪರ್ಕದಲ್ಲಿ ಇದ್ದಾರೆ. ಹೈಕಮಾಂಡ್‌ ನಾಯಕರು ಒಪ್ಪಿದರೆ ನನಗೆ ಒಂದು ದಿನದ ಕೆಲಸ. ಆದರೆ ನಮಗೆ ಈಗ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ ಎಂದು ಸಂತೋಷ್‌ ಹೇಳಿದರು.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo