ಮಲ್ಪೆ: ಅಂಬಲಪಾಡಿ ಕಪ್ಪೆಟ್ಟುವಿನ ಗಣಪತಿ ಶೆಟ್ಟಿಗಾರ್ (74) ಅವರ ಮೃತದೇಹ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಆಗಸ್ಟ್ 30ರಂದು ರಾತ್ರಿ ಊಟ ಮಾಡಿ ಮಲಗಿದ ಅವರು ಬೆಳಗ್ಗೆ ನೋಡುವಾಗ ನಾಪತ್ತೆಯಾಗಿದ್ದರು. ಅವರ ವಾಕಿಂಗ್ ಸ್ಟಿಕ್ ಸಮೀಪದ ಮನೆಯ ಬಾವಿಯ ಬಳಿ ಪತ್ತೆಯಾಗಿತ್ತು. ಬಾವಿಯಲ್ಲಿ ಹುಡುಕಿದಾಗ ಅವರ ಮೃತದೇಹ ಪತ್ತೆಯಾಗಿದೆ. ಕಳೆದ 5 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಉಡುಪಿಯ ಬಾಳಿಗ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ