ದಲಿತ ಸಮುದಾಯ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ ಮಾತಾಡಿ,ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ತಾಲೂಕು ಸಹಸಂಚಾಲಕ ಉಮೇಶ ವಿರುದ್ಧ ಉಡುಪಿಯಲ್ಲಿ ದೂರು ದಾಖಲಿಸಲಾಯಿತು.
ಹಿಂದು ಜಾಗರಣ ವೇದಿಕೆ ಮುಖಂಡ ಉಮೇಶ್ ನಾಯ್ಕ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಪೊಲೀಸ್ ಇಲಾಖೆಗೆ ನೀಡಲಾಗಿರುವ ಕುರಿತು ದಲಿತ ಸಂಘಟನೆಗಳು ತಿಳಿಸಿವೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಅನುಪಸ್ಥಿತಿಯಲ್ಲಿ ಉಡುಪಿ ಪೊಲೀಸ್ ಉಪಾಧೀಕ್ಷಕ ಡಿ.ಟಿ. ಪ್ರಭು ಮನವಿ ಸ್ವೀಕರಿಸಿದರು.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್,ಶಾಮರಾಜ ಬಿರ್ತಿ,ಮಂಜುನಾಥ ಗಿಳಿಯಾರು,ಶಾಮಸುಂದರ ತೆಕ್ಕಟ್ಟೆ,ಕುಮಾರ್ ಕೋಟ,ಹರಿಶ್ಚಂದ್ರ ಕೆ.ಡಿ.,ಶಿವಾನಂದ ಬಿರ್ತಿ,ಶಿವಾನಂದ ಮೂಡಬೆಟ್ಟು,ರಾಘವೇಂದ್ರ ಬೆಳ್ಳೆ,ಶ್ರೀಧರ ಕುಂಜಿಬೆಟ್ಟು ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ