ಉಡುಪಿ : ಕರವೇ ಉಡುಪಿ ತಾಲೂಕು ಮಹಿಳಾ ಘಟಕದಿಂದ 69 ನೇ ಕರ್ನಾಟಕ ರಾಜ್ಯೋತ್ಸವನ್ನು ನ.1ರಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಮಹಿಳಾ ಅಧ್ಯಕ್ಷರಾದ ಹೇಲನ್ ಸೋನ್ಸ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಕನ್ನಡದ ಉಳಿವಿಗಾಗಿ ಹೋರಾಟ ಮಾಡಲು ನಾವೆಲ್ಲರೂ ಬದ್ಧರಾಗಿದ್ದೇವೆ ಎನ್ನುತ್ತಾ, ಕರ್ನಾಟಕದ ಗಡಿ, ನೆಲ, ಜಲದ ಬಗ್ಗೆ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡರು ಮಾಡಿದ ಯಶಸ್ವಿ ಹೊರಟಗಳನ್ನು ನೆನೆದರು, ಹಾಗೂ ಕನ್ನಡ ಸಾಹಿತಿಗಳನ್ನು, ಹೋರಾಟಗಾರರನ್ನು ಸ್ಮರಿಸಿದರು.
ಉಪಾಧ್ಯಕ್ಷರಾದ ಪವಿತ್ರ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಯಾದ ಮುಕ್ತ ಸಾವಂತ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಸಲಹೆಗಾರರಾದ ವಿಜಯ ಶ್ರೀನಿವಾಸ್, ಕಾನೂನು ಸಲಹೆಗಾರರಾದ ಸುನಿತಾ ಸ್ಟೇಲ್ಲಾ, ಹಾಗೂ ಸದಸ್ಯರಾದ ಅನುರಾಧ, ವಿಶಾಲಿ, ಸುಜಾತಾ ಆಚಾರಿ, ವಸಂತಿ ಕೃಷ್ಣ, ಶಾಂತ, ಪ್ರಿಯಾಂಕಾ, ರುಕ್ಮಿಣಿ, ಗಂಗಾ, ಈರಮ್ಮ, ಪ್ರಮೀಳಾ, ಲಕ್ಷ್ಮಿ, ದೇವಮ್ಮ, ವಸಂತಿ ಮಣಿಪಾಲ ಇವರುಗಳೆಲ್ಲರೂ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ