ಮಣಿಪಾಲ: ಬೇಕರಿಯಲ್ಲಿ ನಗ ನಗದು ಕಳವು: ಪ್ರಕರಣ ದಾಖಲು
ಮಣಿಪಾಲ: ಬೇಕರಿಯೊಂದರ ಕ್ಯಾಶ್‌ಬಾಕ್ಸ್ನಲ್ಲಿ ಇಟ್ಟಿದ್ದ ನಗ ನಗದು ಕಳವು ಮಾಡಿರುವ ಘಟನೆ ಮಣಿಪಾಲದ ಅನಂತನಗರದಲ್ಲಿರುವ ಬೇಕರಿಯೊಂದರಲ್ಲಿ ನಡೆದಿದೆ.
ಬೇಕರಿ ಮಾಲೀಕ ಪ್ರಜ್ವಲ್ (28), ಎಂಬುವವರು ಅನಂತನಗರ ಗ್ರೂಪ್ ಆಫ್ ಇನ್ಸ್ಸ್ಟೂಷನ್ ಬಳಿ ಬೇಕ್‌ಲೈನ್ ಎಂಬ ಬೇಕರಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ಕಳ್ಳರು ಬೇಕರಿಯ ಶೆಟರ್ ಬಾಗಿಲಿನ ಒಂದು ಬದಿಯನ್ನು ಎತ್ತಿ ಒಳಗೆ ಹೋಗಿ ಕ್ಯಾಶ್ ಬಾಕ್ಸ್ ನಲ್ಲಿ ಇಟ್ಟಿದ್ದ 30,000/- ರೂಪಾಯಿ ಹಣ ಹಾಗೂ ಕ್ಯಾಶ್ ಡ್ರಾವರ್ ನಲ್ಲಿ ಇರಿಸಿದ್ದ 2000/- ರೂಪಾಯಿ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಬೇಕರಿ ಮಾಲೀಕ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 250/2024 ಕಲಂ: 331(4),305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ