Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕಾರ್ಕಳ: ಕೆಲಸಕ್ಕೆ ಹೋಗಲಾಗುತ್ತಿಲ್ಲ ಎಂದು ಮನನೊಂದು ವಿವಾಹಿತೆ ಆತ್ಮಹತ್ಯೆ

Udupinews

 






ಕಾರ್ಕಳ: ಕೆಲಸಕ್ಕೆ ಹೋಗಲಾಗುತ್ತಿಲ್ಲ ಎಂದು ಮನನೊಂದು ವಿವಾಹಿತೆ ಆತ್ಮಹತ್ಯೆ 


ಕಾರ್ಕಳ: ಹುಟ್ಟಿದ ಮಗುವಿನಿಂದ ಕೆಲಸಕ್ಕೆ ಹೋಗಲು ಅಸಾಧ್ಯವಾಗಿ ಮಾನಸಿಕ ವೇದನೆಯಿಂದ ಕೊರಗುತ್ತಿದ್ದ ಮಹಿಳೆಯೊಬ್ಬಳು ಬದುಕು ಅಂತ್ಯ ಹೇಳಿದ ಘಟನೆ ಈದು ಗ್ರಾಮದಲ್ಲಿ ನಡೆದಿದೆ.

ಈದು ಗ್ರಾಮದ ನಿವಾಸಿ ಪ್ರಸನ್ನಾ (29) ಆತ್ಮಹತ್ಯೆ ಮಾಡಿಕೊಂಡವಳು. ಹೊಸ್ಮಾರ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಥಿತಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. 2022ರಲ್ಲಿ ಈದು ಗ್ರಾಮದ ರಾಜೇಶ್ ಎಂಬವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಸನ್ನಾ 10 ತಿಂಗಳ ಹೆಣ್ಣು ಮಗು ಇದೆ.

ಮದುವೆಯ ನಂತರ ಹೊಸ್ಮಾರ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಥಿತಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ 10 ತಿಂಗಳ ಹೆಣ್ಣು ಮಗು ಇದ್ದು ಗಂಡ ರಾಜೇಶ್‌ ರವರು ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿಕೊಂಡಿರುತ್ತಾರೆ. ಪಸನ್ನಾ ರವರು ಆಗಾಗ ತನ್ನ ತಾಯಿಗೆ ಕರೆಮಾಡಿ ನನಗೆ ಗಂಡನ ಮನೆಯವರು ಒಳ್ಳೆ ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ನನಗೆ ಇಷ್ಟು ಬೇಗ ಮಗು ಬೇಡವಾಗಿತ್ತು ನಾನು ಕೆಲಸಕ್ಕೆ ಹೋಗಲು ಆಗುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಈ ಕಾರಣಕ್ಕೆ ಖಿನ್ನತೆಗೊಳಲಾಗಿದ್ದ ಪ್ರಸನ್ನಾ ರವರು ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಮೃತ ಪ್ರಸನ್ನಾ ರವರು ತಾನು ಕಷ್ಟಪಟ್ಟು ಓದಿದ್ದರೂ ತನಗೆ ಮಗು ಆದ ಕಾರಣ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿ  ಸ್ಟೀಲ್‌ ರಾಡಿಗೆ ಚೂಡಿದಾರ ಶಾಲ್‌ ನಿಂದ ಕುತ್ತಿಗೆ ನೇಣುಬಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

 ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 53/2024 ಕಲಂ: 194 BNS ರಂತೆ ಪ್ರಕರಣ ದಾಖಲಾಗಿರುತ್ತದೆ.










0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo