ಕೃತಿ:- ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕಥೆ
ಲೇಖಕರು:- ಮಂಜುನಾಥ ಕಾಮತ್
ಪುಟ:- ೧೧೧
ಯುವ ಸಾಹಿತಿ ಮಂಜುನಾಥ ಕಾಮತ್ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು.
ನೋಡಿದ ಅಚ್ಚರಿಯನ್ನ, ಜೀವನದಲ್ಲಾಗುವ ಅನುಭವಗಳನ್ನ ಬರೆಯುವುದು ಇವರ ಹವ್ಯಾಸ.
ಸದ್ಯ ಇವರು ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೂ "ದಾರಿ ತಪ್ಪಿಸು ದೇವರೇ" "ನಾನು ಸನ್ಯಾಸಿಯಾಗಲು ಹೊರಟಿದ್ದೆ" ಮತ್ತು "ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕಥೆ " ಎಂಬ ಮೂರು ಕೃತಿಗಳನ್ನ ರಚಿಸಿದ್ದಾರೆ.
ನಾನು ಇತ್ತೀಚೆಗೆ " ಚಂದದ ಹಲ್ಲಿನ ಹುಡುಗಿ " ಓದಿ ಮುಗಿಸಿದೆ. ಮೊದಲು ದಾರಿ ತಪ್ಪಿಸು ದೇವರೇ ಎಂದು ಬೇಡಿಕೊಂಡು ನಂತರ ಸನ್ಯಾಸಿಯಾಗುತ್ತೆನೆ ಎಂದು ಹೊರಟು ಈಗ ಚಂದದ ಹಲ್ಲಿನ ಹುಡುಗಿಯ ಬಲೆಗೆ ಸಿಕ್ಕಿದ್ದಾರೆ.
ಇದರಲ್ಲಿ ಪ್ರೇಮವಿಕಾಸದ ಒಂದೊಂದೇ ಮೆಟ್ಟಿಲುಗಳನ್ನ ಲೀಲಾಜಾಲವಾಗಿ ಬರೆದಿದ್ದಾರೆ.
ಒಂದು ಹುಡುಗ ಮತ್ತು ಹುಡುಗಿ ಪ್ರೀತಿಸಿ ಸುತ್ತಾಡಿ ಒಂದಾಗಿ ಅಂಟಿಕೊಂಡಿರುವುದು ಪ್ರೀತಿಯೇ?
ಅವಳನ್ನ ನೋಡಿ ನನ್ನ ಹೃದಯ ಬಡಿತ ಜೋರಾಗಿ ಅವಳನ್ನೇ ಪ್ರೀತಿ ಮಾಡಲೇಬೇಕು ಎಂದು ಚಡಪಡಿಸುವವರು ಕಾಮತ್ ಅವರ ಈ ಕೃತಿಯನ್ನ ಓದಲೇಬೇಕು. ತಮ್ಮ ಬಗಗೆ ತಾವೇ ನಾನು ಒಳ್ಳೆಯವನಲ್ಲ ಎಂದು ನೇರವಾಗಿ ಹೇಳಿಬಿಡುತ್ತಾರೆ.
ಪ್ರೀತಿ ಎಂಬ ಮಾಯಾಜಾಲದಲ್ಲಿ ಅಡಗಿ ನೋವು-ನಲಿವುಗಳನ್ನ ಅನುಭವಿಸಿ, ಅವಮಾನ ಎಂಬ ಬಲೆಗೆ ಸಿಕ್ಕು ಎದ್ದು ಬಿದ್ದ ಪ್ರೆಮಿಗಳ ಕಥೆಯೇ ಈ ಕೃತಿಯ ಮೂಲ.
ಅಪರಿಚಿತ ಹುಡುಗಿಯರ ಮೇಸೇಜುಗಳು, ಅವರ ಚಂದದ ನಗುವು ಅವರನ್ನ ಬೆರಗುಗೊಳಿಸಿತ್ತು.
ಪ್ರೀತಿಯ ಬಲೆಗೆ ಸಿಲುಕಿರುವ ಅಥವಾ ಸಿಲುಕಿಕೊಳ್ಳುವ ಯುವಕರಿಗೆ ತಮ್ಮ ಅನುಭವ ಬರಹದ ಮೂಲಕ ಎಚ್ಚರ ಕಿವಿಮಾತನ್ನು ನೀಡಿದ್ದಾರೆ.
ಪ್ರೇಮವಿಕಾಸದ ಒಂದೊಂದೆ ಹಂತಗಳನ್ನ, ಪ್ರೇಮದಲ್ಲಿ ಅನುಭವಿಸುವ ಖುಷಿ ಅಥವಾ ದುಃಖದ ಕ್ಷಣಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ.
ಪ್ರೀತಿ ಮಾಡಬೇಕು ಎನ್ನುವವರು ಕಾಮತ್ ರ ಈ ಪುಸ್ತಕವನ್ನ ಒಮ್ಮೆ ಓದಲೇಬೇಕು.
ಕಾಮತ್ ಅವರು ಇದರಲ್ಲಿ ಬರೆದಿರುವ ಒಂದು ಪ್ಯಾರಾಗ್ರಾಫ್ ನನಗೆ ತುಂಬಾನೇ ಹಿಡಿಸಿತು.
" ಎಲ್ಲವೂ ಪ್ರೀತಿಯೇ ಎಂದಲ್ಲ.
ಪ್ರೇಮ ವಿಕಾಸದ ಒಂದೊಂದೇ
ಮೆಟ್ಟಿಲುಗಳು.
ಪ್ರತಿಯೊಂದು ಚಂದದ ನೆನಪುಗಳೇ ಅಂತಲ್ಲ.
ಬದುಕನ್ನ ರೂಪಿಸಿದ ಅಪರೂಪದ
ಅನುಭವಗಳು. "
ಸದಾಶಿವ ಬಿ.ಎನ್
ಎಂ. ಜಿ. ಎಂ. ಕಾಲೇಜು
ಉಡುಪಿ
😍🙏🙏
ಪ್ರತ್ಯುತ್ತರಅಳಿಸಿ