ಘಟನೆಗೆ ಸಂಬಂಧಿಸಿದಂತೆ ನಿನ್ನೆ ಮಕರ ಸಂಕ್ರಾತಿ ದಿನದಂದು ಕುಂದಾಪುರ ಮೂಲದ ಲಕ್ಷ್ಮಿ ಎನ್ನುವ ಮಹಿಳೆ ದೇವರ ದರುಶನ ಪಡೆಯುತ್ತಿದ್ದಾಗ ಮಹಿಳೆಯ ಬಟ್ಟೆಯ ಬ್ಯಾಗಿಗೆ ಹರಿತವಾದ ಅಯುಧದಿಂದ ಹರಿದು, ಅದರಲ್ಲಿದ್ದ ಅತ್ಯವಶ್ಯಕ ಬಿಲ್ ಹಾಗೂ ಮನೆ ಬೀಗ ಸೇರಿದಂತೆ ಪರ್ಸ್ ನಲ್ಲಿದ್ದ ಹತ್ತು ಸಾವಿರ ನಗದು ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಘಟನೆ ವಿಚಾರದಲ್ಲಿ ಲಕ್ಷ್ಮೀ ಯವರು ನಗರ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪೃವತ್ತರಾದ ಉಡುಪಿ ನಗರ ಠಾಣೆಯ ಪೊಲೀಸರು ನಗರದ ಸಿಸಿಟಿವಿ ಹಾಗೂ ಡ್ರೋನ್ ವಿಡಿಯೋಗಳನ್ನು ಪರಿಶೀಲಿಸಿದಾಗ ಅರೋಪಿಗಳ ಸುಳಿವು ದೊರೆಕಿತು ಎನ್ನಲಾಗಿದೆ.
ಅರೋಪಿಗಳು ಉಡುಪಿಯ ಶ್ರೀ ರಾಮ್ ರೆಸಿಡೆನ್ಸಿ ಯಲ್ಲಿ ತಂಗಿರುವ ಬಗ್ಗೆ ಮಾಹಿತಿಯ ಮೇರೆಗೆ ಮೂವರು ಮಹಿಳೆ ಸೇರಿ ಐದು ಮಂದಿ ಅರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಯಲಾಗಿದೆ.
ಬಂಧಿತ ಆರೋಪಿಗಳಾದ ತಮ್ಮಿ ಶೆಟ್ಟಿ ಮಣಿ,ಪ್ರಿಯಾಂಕ ಕಾಕಣಿ,ಇಟ್ಟಾ ಜಾನ್ಸಿ,ಇಟ್ಟಾ ಸಾಗಾರ, ಹರಿಬಾಬು ಬಂಧಿತರಾದ ಖತರ್ ನಾಕ್ ಕಳ್ಳ ರಾಗಿದ್ದು ಇವರೆಲ್ಲರೂ ಅಂಧ್ರ ಮೂಲದವರು ಎಂದು ತಿಳಿದು ಬಂದಿದೆ.
ಉಡುಪಿಯಲ್ಲಿ ಸಂಕ್ರಾತಿ ಹಾಗೂ ಪರ್ಯಾಯ ಉತ್ಸವಗಳು ನಡೆಯುವ ಹಿನ್ನಲೆಯಲ್ಲಿ ಕಳವು ಮಾಡುವ ಉದ್ದೇಶ ದಿಂದ ಉಡುಪಿಗೆ ಬಂದಿರುವ ಬಗ್ಗೆ ಪೊಲೀಸರಲ್ಲಿ ಅರೋಪಿಗಳು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಪೊಲೀಸ್ ಕಾರ್ಯಾಚರಣೆಯಲ್ಲಿ ಉಡುಪಿ ಎಸ್. ಪಿ. ಎನ್. ವಿಷ್ಣುವರ್ಧನ್ ಅವರ ಮಾರ್ಗದರ್ಶನದಂತೆ ಎ .ಎಸ್ .ಪಿ ಕುಮಾರಚಂದ್ರ ಡಿ. ವೈ. ಎಸ್ .ಪಿ ಸದನಂದ ನಾಯ್ಕ್, ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆ ಪೊಲೀಸ್ ನೀರಿಕ್ಷಕರಾದ ಪ್ರಮೋದ್ ಕುಮಾರ್ ಪಿ , ಉಪ ನಿರೀಕ್ಷಕರಾದ ವಾಸಪ್ಪ ನಾಯ್ಕ್ ,
ಪಿ. ಎಸ್ .ಐ. ಪ್ರಸಾದ್, ಸುಹಾಸ್,ಎ ಎಸ್ ಐ ವಿಜಯ್ ಸಿಬಂದಿಗಳಾದ ಜೀವನ್, ಸತೀಶ್ ,ಲೋಕೆಶ್, ಅಶಾಲತ, ಬಾಲಕೃಷ್ಣ ,ರಿಯಾಜ್ ಅಹ್ಮದ್, ಚೇತನ್ ,ಕಿರಣ್ , ಸಂತೋಷ್, ಸುಷ್ಮಾ, ರೂಪ, ಕಾರ್ತಿಕ್ ಗಂಗಾಧರಪ್ಪ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ