ಕಲ್ಸಂಕ ಸರ್ಕಲ್ ಬಳಿ ಈ ಅಭಿಯಾನಕ್ಕೆ ನಗರ ಪೊಲೀಸ್ ಠಾಣೆಯ ಎ.ಎಸ್.ಐ ಹರೀಶ್ ಚಾಲನೆ ನೀಡಿದರು. ಅಭಿಯಾನ ಜಾಥವು ಸಿಟಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ ಹಾಗೂ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಈ ವೇಳೆ ಕೊರೊನಾ ಸೂಕ್ಷ್ಮಾಣುವಿನ ಐದು ಅಡಿಯ ಮಾದರಿಯ ತದ್ರೂಪವನ್ನು ರಚಿಸಲಾಗಿತ್ತು.
ರೋಗಾಣು ಕಲಾಕೃತಿಯೊಳಗಿದ್ದು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ನಗರದ ಪ್ರಮುಖ ಮಾರ್ಗಗಳಲ್ಲಿ ಜಾಗ್ರತಿ ಮೂಡಿಸಿ ಗಮನ ಸೆಳೆದರು. ಕೊರೊನಾ ರೋಗಣು ಕಲಾಕೃತಿಯನ್ನು ಕಲಾವಿದರಾದ ಮಹೇಶ್ ಮತ್ತು ಲೊಕೇಶ್ ರಚಿಸಿದ್ದರು. ಅಭಿಯಾನದಲ್ಲಿ ಕೆ.ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ರಾಜೇಶ್ ದೇವಾಡಿಗ ಕಾಪು, ಡೇವಿಡ್ ಕುಕ್ಕಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ