ಆರೂರು ಗ್ರಾಮ ಪಂಚಾಯತ್ ವತಿಯಿಂದ ಅಳವಡಿಸಿದ್ದ ಸೋಲಾರ್ ದಾರಿ ದೀಪಗಳ ಬ್ಯಾಟರಿ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಪ್ಪೂರು ಅಮ್ಮುಂಜೆ ನಿವಾಸಿ ಯಜ್ಞೇಶ್(24), ಉದ್ಯಾವರ ಮೂಲದ ಪೂರ್ಣೇಶ್ ಆಚಾರ್ಯ(22) ಬಂಧಿತ ಆರೋಪಿಗಳು.
ಕದ್ದ ಬ್ಯಾಟರಿಗಳನ್ನು ಮಾರಾಟ ಮಾಡಲು ತೆರಳುತ್ತಿದ್ದ ವೇಳೆ, ಪೋಲೀಸರು ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಬೈಕ್ ಹಾಗೂ ಬ್ಯಾಟರಿ ಸಮೇತ ಆರೋಪಿಗಳನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದು, ಮಾತ್ರವಲ್ಲದೆ ಅವರು ಬೇರೆ ಕಡೆ ಮಾರಾಟ ಮಾಡಲು ಇರಿಸಿದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬ್ಯಾಟರಿಗಳ ಕಳವಿನ ಬಗ್ಗೆ ಆರೂರು ಪಂಚಾಯತ್ ಉಪಾಧ್ಯಕ್ಷ ಗುರುರಾಜ್ ಭಟ್ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ