ಕುಂದಾಪುರ:-ಟ್ಯಾಂಕರ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರೊಂದು ನಜ್ಜುಗುಜ್ಜಾದ ಘಟನೆ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಚಾಲಕ ಸಹಿತ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಕಾರಿಗೆ ಹಿಂಭಾಗದಿಂದ ಬಂದ ಟ್ಯಾಂಕರ್ ಡಿಕ್ಕಿ: ಹೊಡೆದಿದೆ. ಕಾರಿನಲ್ಲಿ ಚಾಲಕ ಸಹಿತ ಇಬ್ಬರು ಮಹಿಳಾ ಪ್ರಯಾಣಿಕರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಟ್ಯಾಂಕರ್ ಹಾಗೂ ಕಾರು ಎರಡೂ ವಾಹನಗಳು ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದು, ಕೊರವಡಿ ಕ್ರಾಸ್ ಬಳಿ ಆಟೋ ರಿಕ್ಷಾವೊಂದು ಎದುರುಗಡೆಯಿಂದ (ಒನ್ ವೇ ಬಂದಾಗ ಕಾರು ಚಾಲಕ ಬಲಭಾಗಕ್ಕೆ ಕಾರು ಚಲಾಯಿಸಿದ್ದು ಹಿಂಬದಿಯಿದ್ದ ಟ್ಯಾಂಕರ್ ಕಾರಿಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಳಗ್ಗಿನ ಹೊತ್ತಿನಲ್ಲಿ ಅಪಘಾತ ನಡೆದಿರುವುದರಿಂದ ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ತೆರಳುವವರು ಕೆಲಹೊತ್ತು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸಬೇಕಾಯಿತು.
ಸ್ಥಳಕ್ಕೆ ಕೋಟ ಠಾಣೆಯ ಪೋಲಿಸರು ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Paapa tankarnavaru enta madud sudden agi carnavaru adda bandidu tankar chalaka control madiduddarinda carnavaru bachavadaru ...
ಪ್ರತ್ಯುತ್ತರಅಳಿಸಿ