ಶ್ರೀಹರಿಕೋಟಾ: ದೇಶದ ಮೊದಲ ಖಾಸಗಿ ರಾಕೆಟ್ ನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ. ಮೊದಲ ಖಾಸಗಿ ರಾಕೆಟ್ ವಿಕ್ರಂ ಎಸ್, ಶ್ರೀ ಹರಿ ಕೋಟಾದಿದಂ ಯಶಸ್ವಿಯಾಗಿ ಉಡಾವಣೆಯಾಗಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ವಿಕ್ರಂ ಸಾರಾಭಾಯಿ ಅವರ ಹೆಸರನ್ನು ಈ ರಾಕೆಟ್ ಗೆ ಇಡಲಾಗಿದೆ. ತೆಲಂಗಾಣದ ಸೈ ರೂಟ ಎರೋಸ್ಪೇಸ್ ಸಂಸ್ಥೆ ಈ ರಾಕೆಟ್ ನಿರ್ಮಿಸಿದೆ.. ಚಿಕ್ಕ ಉಪ್ರಗ್ರಹಗಳನ್ನು ಈ ರಾಕೆಟ್ ಹೊತ್ತೊಯ್ದಿದೆ.ಇಸ್ರೋ ಕೈಗೊಂಡ ಮೊದಲ ಖಾಸಗಿ ರಾಕೆಟ್ ಉಡಾವಣೆ ಇದಾಗಿದೆ.
2020ರಲ್ಲಿ ಕೇಂದ್ರ ಸರ್ಕಾರವು ಖಾಸಗಿಯವರಿಗೆ ಬಾಹ್ಯಾಕಾಶವನ್ನು ಮುಕ್ತಗೊಳಿಸಿದ ನಂತರ ಭಾರತದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅವಕಾಶ ಪಡೆದ ಮೊದಲ ಕಂಪೆನಿ ಸ್ಕೈ ರೂಟ್ ಏರೋಸ್ಪೇಸ್ ಆಗಿದೆ. ಈಗ ಮೊದಲ ವಿಕ್ರಮ್ ಎಸ್ ರಾಕೆಟ್‌ನ ಉಡಾವಣೆಯನ್ನು ಬೆಳಗ್ಗೆ 11.30ಕ್ಕೆ ಉಡಾವಣೆ ಮಾಡಲಾಯಿತು.
6 ಮೀಟರ್ ಎತ್ತರವುಳ್ಳ ವಿಕ್ರಮ್ ಎಸ್ ರಾಕೆಟ್ ವಿಶ್ವದ ಮೊದಲ ಸಂಪೂರ್ಣ ಸಂಯೋಜಿತ ರಾಕೆಟ್‌ಗಳಲ್ಲಿ ಒಂದಾಗಿದೆ. ಇದು ಉಡಾವಣಾ ವಾಹನದ ಸ್ಪಿನ್ ಸ್ಥಿರತೆಗಾಗಿ 3-ಡಿ ಮುದ್ರಿತ ಘನ ಥ್ರಸ್ಟರ್‌ಗಳನ್ನು ಹೊಂದಿದೆ ಎಂದು ಸ್ಕೈರೂಟ್ ಕಾರ್ಯಕಾರಿಯೊಬ್ಬರು ಹೇಳಿದ್ದಾರೆ. ರಾಕೆಟ್‌ನ ಉಡಾವಣಾ ಟೆಲಿಮೆಟ್ರಿ, ಟ್ರ್ಯಾಕಿಂಗ್ ಜಡತ್ವ ಮಾಪನ, ಗ್ಲೋಬಲ್ ಪ್ರೊಸಿಷನಿಂಗ್ ಸಿಸ್ಟಮ್, ಆನ್ ಬೋರ್ಡ್ ಕ್ಯಾಮಾರ, ಡೇಟಾ ಸ್ವಾಧೀನ ಮತ್ತು ವಿದ್ಯುತ್ ವ್ಯವಸ್ಥೆಗಳಂತಹ ವಿಕ್ರಮ್ ಸರಣಿಯಲ್ಲಿ ಏವಿಯನಿಕ್ಸ್ ಸಿಸ್ಟಮ್‌ಗಳಂತಹ ವ್ಯವಸ್ಥೆ ಹೊಂದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ