ನವದೆಹಲಿ: ಜಾರ್ಖಂಡ್ ನ ಸರಕಾರಿ ಮಹಿಳಾ ಅಧಿಕಾರಿಯೊಬ್ಬರು ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು, ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಮಿಥಾಲಿ ಶರ್ಮಾ ಎಂಬ ಅಧಿಕಾರಿ ಒಂದು ವಾರದ ಹಿಂದೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ಸಹಕಾರಿ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ಆಗಿ ನಿಯೋಜನೆಗೊಂಡಿದ್ದರು.
ಈ ವೇಳೆ ಕೊಡೆರ್ಮಾ ವ್ಯಾಪಾರ ಮಂಡಳಿ ಸಹಯೋಗ ಸಮಿತಿ ಲಿಮಿಟೆಡ್‌ನ ನಿರ್ವಹಣಾ ಸಮಿತಿಯ ಸದಸ್ಯ ರಾಮೇಶ್ವರ ಪ್ರಸಾದ್ ಯಾದವ್ಗೆ ಯಾವುದೋ ವಿಚಾರವಾಗಿ ಶೋಕಾಸ್ ನೊಟೀಸ್ ನೀಡುವ ವಿಚಾರವಾಗಿ ಮಾತನಾದಿದ್ದಾರೆ.
ಇದು ಯಾದವ್ ಗೆ ಅರ್ಥವಾಗದ ಕಾರಣ ಇನ್ನೊಂದು ದಿನ ಯಾದವ್ ಮಿಥಾಲಿ ಶರ್ಮಾ ಕಚೇರಿಗೆ ಬಂದು ತನಗೆ ನೀಡುವ ನೊಟೀಸ್ ವಿಚಾರವಾಗಿ ಮಾತನಾಡಿದ್ದಾರೆ. ಈ ವೇಳೆ ಮಿಥಾಲಿ ಶರ್ಮಾ ಯಾದವ್‌ಗೆ, ನೀವು ಶೋಕಾಸ್ ನೊಟೀಸ್ ನಿಂದ ಪರಾಗಬೇಕಾದರೆ ಇಪ್ಪತ್ತು ಸಾವಿರ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಬಗ್ಗೆ ಜಾರ್ಖಂಡ್‌ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಯಾದವ್ ಮಿಥಾಲಿ ಶರ್ಮಾ ವಿರುದ್ಧ ದೂರ ನೀಡಿದ್ದಾರೆ. ಅದರಂತೆ ಜುಲೈ 7 ರಂದು ಯಾದವ್, ಮಿಥಾಲಿ ಶರ್ಮಾ ಕಚೇರಿಯಲ್ಲಿ ಹತ್ತು ಸಾವಿರ ಲಂಚ ನೀಡುವ ವೇಳೆ ಎಸಿಬಿ ಅಧಿಕಾರಿಗಳು ಮಹಿಳಾ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸಧ್ಯ ಮಹಿಳಾ ಅಧಿಕಾರಿ ಎಸಿಬಿ ಅಧಿಕಾರಿಗಳ ವಶದಲ್ಲಿದ್ದು ತನಿಖೆ ನಡೆಯುತ್ತಿದೆ.
*ಉಡುಪಿ ಜಿಲ್ಲೆಗೆ ಸಂಬಂಧಿತ ಯಾವುದೇ ಸುದ್ದಿ ಹಾಗೂ ವೀಡಿಯೋಗಳನ್ನು ನಮಗೆ ಕಳುಹಿಸಿ ನಾವು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ WHATSAPP NUMBER:-9845507611*
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ