ಕುಂದಾಪುರ : ಉಪ್ಪುಂದ ಕರ್ಕಿಕಳಿ ಎಂಬಲ್ಲಿ ನಡೆದ ದೋಣಿ ದುರಂತದ ಪ್ರದೇಶ ಹಾಗೂ ಮೃತ ಮೀನುಗಾರರ ಮನೆಗಳಿಗೆ ರಾಜ್ಯ ಬಂದರು ಹಾಗೂ ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಭೇಟಿ ನೀಡಿ ಸಾಂತ್ವಾನ ಹೇಳಿ ತಲಾ 6 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಮೀನುಗಾರ ಕುಟುಂಬಕ್ಕೆ 24 ಗಂಟೆಯೊಳಗೆ ಸಂಕಷ್ಟ ಪರಿಹಾರ ನಿಧಿ ದೊರಕಿಸಿಕೊಡಬೇಕೆಂದು ಶ್ರಮವಹಿಸಿದ್ದು, ಮೃತ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ಚೆಕ್ ಹಸ್ತಾಂತರಿಸಲಾಗುತ್ತಿದೆ. ಕೊಡೇರಿ ಬಂದರಿನ ಇಬ್ಬದಿಯಲ್ಲಿ 250 ಮೀ. ಬ್ರೇಕ್ ವಾಟರ್ ವಿಸ್ತರಿಸುವ ಬಗ್ಗೆ ಶಾಸಕರು ಹಾಗೂ ಮಾಜಿ ಶಾಸಕರು ಬೇಡಿಕೆ ಇರಿಸಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಅನುಷ್ಠಾನದ ಬಗ್ಗೆ ಕ್ರಮವಹಿಸಲಾಗುವುದು. ಸಿಆಝಡ್ ಸಮಸ್ಯೆ ನಿವಾರಣೆಗೆ ತಂಡ ರಚಿಸಲಾಗಿದ್ದು, ಮರವಂತೆ ಬಂದರು ಕಾಮಗಾರಿಯೂ ಆರಂಭವಾಗಲಿದೆ ಎಂದು ಸಚಿವರು ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ