Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಭಾರತ್ ಜೋಡೋ 2.Oಗೆ ಸಜ್ಜಾದ ರಾಹುಲ್ ಗಾಂಧಿ; ಶೀಘ್ರದಲ್ಲೇ ಗುಜರಾತ್‌ನಿಂದ ಮೇಘಾಲಯಕ್ಕೆ ಪಾದಯಾತ್ರೆ

Udupi

 


ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ-ಕಾಶ್ಮೀರದವರೆಗೆ ನಡೆದಿದ್ದ ಭಾರತ್​ ಜೋಡೋ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ದೊರಕಿತ್ತು. ಮೊದಲನೇ ಹಂತದಲ್ಲಿ ದೊರೆಕಿದ್ದ ಯಶಸ್ಸಿನಿಂದ ಕಾಂಗ್ರೆಸ್​ ನಾಯಕರು ಎರಡನೇ ಭಾಗದ ಭಾರತ್​ ಜೋಡೋ ಯಾತ್ರೆ ನಡೆಸಲು ಮುಂದಾಗಿದ್ದು, ಈ ಬಾರಿ ಪೂರ್ವದಿಂದ ಪಶ್ಚಿಮ ರಾಜ್ಯಗಳತ್ತ ಪಾದಯಾತ್ರೆ ನಡೆಸಲಿದ್ದಾರೆ.

ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ನಾನಾ ಪಟೋಲೆ ಕನ್ಯಾಕುಮಾರಿಯಿಂದ-ಕಾಶ್ಮೀರದವರೆಗೆ ರಾಹುಲ್​ ಗಾಂಧಿ ನಡೆಸಿದ ಭಾರತ್​ ಜೋಡೋ ಯಾತ್ರೆಗೆ ಅಭೂತಪೂರ್ವ ಯಶಸ್ಸು ದೊರೆಕಿತ್ತು. ಎರಡನೇ ಹಂತದಲ್ಲಿ ಗುಜರಾತಿನಿಂದ ಮೇಘಾಲಯದವರೆಗೆ ಭಾರತ್​ ಜೋಡೋ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.

ಮೊದಲನೇ ಹಂತದಲ್ಲಿ ದಕ್ಷಿಣದಿಂದ ಉತ್ತರ ಭಾರತದತ್ತ ಹೆಜ್ಜೆ ಹಾಕಲಾಗಿತ್ತು. ಈ ಬಾರಿ ಪೂರ್ವದಿಂದ ಪಶ್ಚಿಮ ರಾಜ್ಯಗಳತ್ತ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಗುಜರಾತ್​ನಿಂದ ಎರಡನೇ ಹಂತದ ಯಾತ್ರೆ ಆರಂಭವಾಗಲಿದೆ. ಈ ಸಂಬಂಧ ವೀಕ್ಷಕರನ್ನೂ ನೇಮಿಸಲಾಗಿದ್ದು ಸಮಿತಿ ನೀಡುವ ವರದಿ ಆಧರಿಸಿ ಸಿದ್ದತೆಗಳನ್ನು ಆರಂಭಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ನಾನಾ ಪಟೋಲೆ ಮಾಹಿತಿ ನೀಡಿದ್ದಾರೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo