ಬಾಳ್ಕುದ್ರು : 49 ನೇ ವರ್ಷದ ಶ್ರೀ ಗಣೇಶೋತ್ಸವದ ಅಂಗವಾಗಿ ಸರ್ವೋದಯ ಯುವಕ ಮಂಡಲ ()ರಿ ಹಾಗೂ ಮಹಿಳಾ ಮಂಡಲ ಹಂಗಾರಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ 2024 ನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳ್ಕುದ್ರುವಿನಲ್ಲಿ ಆಯೋಜಿಸಲಾಯಿತು.
ಗ್ರಾಮೀಣ ಕ್ರೀಡಾಕೂಟವನ್ನು ರೋಟರಿ ಕ್ಲಬ್ ಸಾಸ್ತಾನ ಹಂಗಾರಕಟ್ಟೆ ಇದರ ಅಧ್ಯಕ್ಷರಾದ ಲೀಲಾವತಿ ಗಂಗಾದರ್ ಇವರು ವಿಕೇಟ್ ಗೆ ಗುರಿ ಇಡುವ ಮೂಲಕ ಉದ್ಘಾಟಿಸಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾದ ವಿನಮ್ ಅಡಿಗ ರವರು ಈ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳ ಪರಿಚಯ ಎಲ್ಲರಲ್ಲಿಯೂ ಮೂಡಬೇಕು. ಕ್ರೀಡೆಯು ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಆದರಿಂದ ಸೋಲು ಗೆಲುವಿನ ಪರಿವಿಲ್ಲದೆ ಎಲ್ಲರೂ ಭಾಗವಹಿಸಿ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸರ್ವೊದಯ ಯುವಕ ಮಂಡಲದ ಅಧ್ಯಕ್ಷರಾದ ವಿಜೇತ್ ದೇವಾಡಿಗ , ಮಹಿಳಾ ಮಂಡಲದ ಅಧ್ಯಕ್ಷರಾದ ರೇಖಾ ಪಿ ಸುವರ್ಣ, ಶಾಲಾ ಉಸ್ತುವಾರಿ ಸಂಘದ ಅಧ್ಯಕ್ಷರಾದ ಸುಭಾಷ್ ಪೂಜಾರಿ , ಊರಿನ ಗಣ್ಯರಾದ ವಿನಯ್ ಅಡಿಗ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾದ ಶೇಖರ್ ಗದ್ದೆಮನೆ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷರಾದ ಲೀಲಾವತಿ ಗಂಗಾಧರ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷರಾದ ವಿಜಯ್ ಪೂಜಾರಿ, ಹಿರಿಯರಾದ ನಾರಾಯಣ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ