ಮಣಿಪಾಲ: ಸಾಲದ ಚಿಂತೆಯಿಂದ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಶ್ರೀಮತಿ ವಿಮಲಾ (50 ) ಶಿವಳ್ಳಿ ಗ್ರಾಮ ಇವರ ಮಗಳು ಶ್ರುತಿ ಸುಮಾರು 05 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದು ಮದುವೆ ಬಳಿಕ ತನ್ನ ಅಜ್ಜಿ ಮನೆಯಾದ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅನಂತನಗರ ಮಂಚಿಕುಮೇರಿ ಎಂಬಲ್ಲಿ ವಾಸಮಾಡಿಕೊಂಡಿದ್ದು ಎರಡು ವರ್ಷಗಳ ಹಿಂದೆ ಗಂಡನ ಕಾಯಿಲೆಗೆ ಸುಮಾರು ಸಾಲ ಮಾಡಿಕೊಂಡು ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಇರಿಸಿದ್ದು ಸಾಲ ಮಾಡಿಕೊಂಡ ಚಿಂತೆಯಿಂದ ಹಾಗೂ ಚಿನ್ನವನ್ನು ಬಿಡಿಸಲು ಆಗಲಿಲ್ಲ ಎಂಬ ಚಿಂತೆಯಿಂದ ಮನನೊಂದು ಶ್ರುತಿ ರವರು ತನ್ನ ಮನೆಯ ಹಾಲ್ ನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ನಂಬ್ರ 48/2024 ಕಲಂ: 194 ಬಿ.ಎನ್.ಎಸ್.ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ